Sedam
ನಾಳೆಯಿಂದಲ್ಲ... ಈ ಕ್ಷಣದಿಂದಲೇ ನೀರುಳಿಸಿ
ರಾಜಧಾನಿಯಿಂದ

ಸೇಡಂ ಶ್ರೀನಿವಾಸ,
ಹಿರಿಯ ಪತ್ರಕರ್ತರು ಬೆಂಗಳೂರು
ಭಾನುವಾರ, ನವೆಂಬರ್ 1, 20262 ನಿಮಿಷ ಓದು14 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
ಜಲಕ್ಷಾಮ : ೨೪೦ ದಿನಗಳ ಅಗ್ನಿಪರೀಕ್ಷೆ
ಅರ್ಧ ಲೋಟ ಆತಿಥ್ಯ . . .ಬಂದ ಅತಿಥಿಗಳವರಿಗೆ ಅರ್ಧ ಲೋಟ ಮಾತ್ರ ಕುಡಿಯಲು ನೀರು ಕೊಡಿ, ಮತ್ತು ನಗುತ್ತಾ ಹೇಳಿ “ನೀರು ಅಮೂಲ್ಯ, ಬೇಕಿದ್ದರೆ ಮತ್ತೊಮ್ಮೆ ಕೊಡುತ್ತೇನೆ’ ಇದು ಅಪಮಾನವಲ್ಲ, ಇದು ಜಾಗೃತಿ.
ಬೆಂಗಳೂರಿನ ಲಾಲ್ಬಾಗ್ ನಲ್ಲಿ ಹೂವು ಅರಳಬೇಕಾದ ಸಮಯದಲ್ಲಿ ಭೂಮಿ ಬಿರುಕು ಬಿಡುತ್ತಿದೆ. ಮೈಸೂರಿನ ಅರಮನೆಯ ಮುಂದಿನ ಕಾರಂಜಿ ನಿಂತು ಹೋಗಿದೆ. ಕಾವೇರಿಯ ಒಡಲು ಖಾಲಿಯಾಗುತ್ತಿದೆ. ಹೌದು, ಕ್ಯಾಲೆಂಡರ್ ಹೇಳುವುದು ಅಕ್ಟೋಬರ್ ೨೦೨೬ ಎಂದು, ಆದರೆ, ವಾತಾವರಣ ಹೇಳುತ್ತಿದೆ ಮೇ ತಿಂಗಳ ಬೇಸಿಗೆ ಎಂದು..
ಪ್ರಕೃತಿ ನಮಗೆ ಈ ವರ್ಷ ಕಠೀಣ ಎಚ್ಚರಿಕೆ ಕೊಟ್ಟಿದೆ. ಮುಂಗಾರು ಕೈ ಕೊಟ್ಟಿದೆ. ಜೂನ್, ಜುಲೈನಲ್ಲಿ ಬರವೇಕಾದ ಮಳೆ ಒಂದು ಅಂದಾಜಿನ ಪ್ರಕಾರ ಶೇ.೪೦% ಕಡಿಮೆ. ಕೃಷ್ಣ, ಕಾವೇರಿ, ತುಂಗಭದ್ರಾ, ಹೇಮಾವತಿ ಒಳಗೊಂಡ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡಾ ೩೦ ಪ್ರತಿಶತಕ್ಕಿಂತ ಕಡಿಮೆ ಇದೆ. ಇದು ಕೇವಲ ರೈತರ ಸಮಸ್ಯೆ ಅಲ್ಲ. ಇದು ಬೆಂಗಳೂರಿನ ೭ ಹಿಲ್ಸ್ ಪ್ಯಾರಾಡೈಸ್ ಒಳಗೊಂಡAತೆ ಸಹಸ್ರಾರು ಅಪಾರ್ಟ್ಮೆಂಟ್ನಲ್ಲಿ ವಾಸಿಸುವ ನಮ್ಮ ನಿಮ್ಮೆಲ್ಲರ ಬದುಕಿನ ಸಮಸ್ಯೆ. ಇನ್ನೂ ಹಳ್ಳಿಗಳಲ್ಲಿಯ ಜನ ಜೀವನ ನೀರಿಗಾಗಿ ಅಲ್ಲದೇ ಮಳೆ ಕೊರತೆಯಿಂದ ಗ್ರಾಮೀಣ ಜನರ ಬದುಕಿಗೆ ಸಹಜವಾಗಿ ಸಿಗುವ ಆಹಾರವೂ ಎಲ್ಲಿಲ್ಲದ ಸಮಸ್ಯೆ ಉಂಟು ಮಾಡುವಲ್ಲಿ ಎರಡು ಮಾತಿಲ್ಲ.
ಮುಂದೆ ನಮ್ಮ ಮುಂದೆ ಇರುವ (೦೮) ಎಂಟು ತಿಂಗಳ ಮರುಭೂಮಿ ಒಮ್ಮೆ ಕ್ಯಾಲೆಂಡರ್ ನೋಡಿ ಮುಂದಿನ ಆ ೨೪೦ ದಿನಗಳ ಭಯಾನಕ ಚಿತ್ರಣ.
ಅಕ್ಟೋಬರ್-೨೦೨೬-ಒಣಗಿದ ಮುಂಗಾರು. ಸಾಮಾನ್ಯ ವಾಗಿ ಹಿಂಗಾರು ಮಳೆ ಬರಬೇಕಾದ ತಿಂಗಳು, ಆದರೆ, ಈ ಬಾರಿ ಮೋಡಗಳೇ ಇಲ್ಲ. ಆಣೆಕಟ್ಟುಗಳಲ್ಲಿ ನೀರು ತುಂಬಬೇಕಾದ ಸಮಯದಲ್ಲೇ ಖಾಲಿ ಖಾಲಿ.
ನವೆಂಬರ್- ಚಳಿಗಾಲದಲ್ಲೂ ಬರ-ಚಳಿಗಾಲ ಆರಂಭವಾಗುತ್ತದೆ. ಆದರೆ, ನಲ್ಲಿಯಲ್ಲಿ ನೀರಿನ ಬರ. ಬೋರ್ವೆಲ್ಗಳಲ್ಲಿ ಈಗಾಗಲೇ ನೀರಿನ ಮಟ್ಟ ಸಾವಿರಾರು ಅಡಿಗಿಂತ ಕೆಳಗೆ ಹೋಗಿದೆ . ರಾಜ್ಯೋತ್ಸವದ ಹಾಡಿನ ಬದಲು ಟ್ಯಾಂಕರ್ ಹಾರ್ನ್ ಶಬ್ದವೇ ಹೆಚ್ಚು ಕೇಳಿಸುತ್ತದೆ.
ಡಿಸೆಂಬರ್-ಚಳಿ ಮತ್ತು ಚಿಂತೆ- ಚಳಿ ವಿಪರೀತ ಆಗುವ ಸಂಭವ. ಆದರೆ, ಕುಡಿಯುವ ನೀರಿಗಾಗಿ ಚಿಂತೆ. ಈಗಾಗಲೇ ಟ್ಯಾಂಕರ್ ನೀರಿನ ಮೇಲೆ ಸಾಗಿರುವ ಅಪಾರ್ಟ್ಮೆಂಟ್ಗಳ ನಿವಾಸಿಗಳಿಗೆ ಟ್ಯಾಂಕರ್ ನೀರಿನ ಬೆಲೆ ದುಪ್ಪಟ್ಟು ಆಗುವಲ್ಲಿ ಯಾವುದೇ ಸಂಶಯವಿಲ್ಲ.
ಜನವರಿ-೨೦೨೭-ಬರಿದಾದ ಹೊಸ ವರ್ಷ- ಹೊಸ ವರ್ಷದ ಸಂಭ್ರಮದ ನಡುವೆಯೂ, ನೀರಿನ ಕೊರೆತೆಯೊಂದಿಗೆ ಆರಂಭ. ಗಣರಾಜ್ಜೋತ್ಸವ ಸಂಭ್ರಮ ಮಧ್ಯೆ ಅಳುಕಿನ ನೀರೋತ್ಸವ. . .
ಫೆಬ್ರವರಿ- ಬಾವಿಗಳು ಬತ್ತುವ ತಿಂಗಳು- ಗ್ರಾಮೀಣ ಕರ್ನಾಟಕದಲ್ಲಿ ಬಾವಿಗಳು ಸಂಪೂರ್ಣ ಬತ್ತುವ ಆತಂಕಕಾರಿ ವಿಷಯ ದಟ್ಟವಾದದ್ದು. ನಗರದಲ್ಲಿ ವಾರಕ್ಕೆ ಎರಡು ದಿನಕ್ಕೊಮ್ಮೆ ಮಾತ್ರ ನೀರು ಸರಬರಾಜು ಅದೂ ಅದೃಷ್ಟದ ಸಂಕೇತ.
ಮಾರ್ಚ್- ಸುಡುವ ಬಿಸಿಲಿನ ಆರಂಭ ಮಧ್ಯೆ ಮಕ್ಕಳ ಪರೀಕ್ಷೆ ಸಮಯ- ಜೊತೆಗೆ ನೀರಿನ ಸರಬರಾಜಿಗೆ ಅಗ್ನಿ ಪರೀಕ್ಷೆ.
ಏಪ್ರಿಲ್- ಟ್ಯಾಂಕರ್ಗಾಗಿ ಸರತಿ ಸಾಲು-ಹೆಚ್ಚು ಹೆಚ್ಚು ಬೇಡಿಕೆ. ಟ್ಯಾಂಕರ್ಗಾಗಿ ೨-೩ ದಿನಕ್ಕೂ ಹೆಚ್ಚು ಕಾಯುವ ಸಂಭವ ಹೆಚ್ಚು.
ಮೇ-ಪ್ರತಿ ಹನಿ ನೀರಿಗಾಗಿ ಹೋರಾಟ- ಅತ್ಯಂತ ಬೀಕರ ತಿಂಗಳು. ೪೨ ಡಿಗ್ರಿ ಬಿಸಿಲು. ಪ್ರತಿ ಹನಿ-ನೀರಿಗಾಗಿ ಮರಣ ಹೋರಾಟ.
ಹೀಗೆ ಸತತವಾಗು ೨೪೦ ದಿನಗಳು! ಎಂಟು ತಿಂಗಳು! ಇದು ಸಾಮಾನ್ಯವಲ್ಲ. . ನಿಜಕ್ಕೂ ಜನರು ಮತ್ತು ಸರ್ಕಾರಕ್ಕೂ ಅಗ್ನಿ ಪರೀಕ್ಷೆ.
ಮೇಲಿನ ಈ ದೊಡ್ಡ ತಪ್ಪು ಕಲ್ಪನೆಯನ್ನು ಇಂದೇ ಬಿಡೋಣ. . ‘ಬರಗಾಲ ಕೇವಲ ರೈತರ ಸಮಸ್ಯೆ’ ಮಾತ್ರ ನಮಗೇನು ಸಂಬAಧ? ಇಲ್ಲ. ರೈತ ಬೆಳೆಯದಿದ್ದರೆ ನಮ್ಮ ತಟ್ಟೆಗೆ-ಹೊಟ್ಟೆಗೆ ಅನ್ನ ಬರುವುದಿಲ್ಲ. ರೈತರ ಬಾವಿ ಬತ್ತಿದರೆ ನಮ್ಮ ನಲ್ಲಿಯೂ ಬತ್ತುತ್ತದೆ. ನೀರು ಎಂಬುದು ಒಂದು ಸರಪಳಿ. ಒಂದು ಕೊಂಡಿ ಕಡಿದರೆ ಇಡೀ ಸರಪಳಿ ಕಡಿಯುತ್ತದೆ.
ಆದ್ದರಿಂದ ಇಂದಿನಿAದಲೇ ನಾವೆಲ್ಲರೂ ‘ಮಿಷನ್ ಮೋಡ್’.. ಯುದ್ದೋಪಾದಿಯಲ್ಲಿ ಕೆಲಸ ಆರಂಭಿಸಬೇಕು. ಇದು ಸರ್ಕಾರದ ಕೆಲಸ ಅಲ್ಲ. ಇದು ನಮ್ಮ ಮನೆ ಮನೆಗಳಿಂದ ಆರಂಭವಾಗಬೇಕಾದ ‘ಜಲ ಕ್ರಾಂತಿ’
ಅರ್ಧ ಲೋಟ ಆತಿಥ್ಯ - ಬಂದ ಅತಿಥಿಗಳವರಿಗೆ ಅರ್ಧ ಲೋಟ ಮಾತ್ರ ಕುಡಿಯಲು ನೀರು ಕೊಡಿ, ಮತ್ತು ನಗುತ್ತಾ ಹೇಳಿ “ನೀರು ಅಮೂಲ್ಯ, ಬೇಕಿದ್ದರೆ ಮತ್ತೊಮ್ಮೆ ಕೊಡುತ್ತೇನೆ’ ಇದು ಅಪಮಾನವಲ್ಲ, ಇದು ಜಾಗೃತಿ.
ಶವರ್ ಬಾತ್ ನಿಲ್ಲಿಸಿ ಬಕೆಟ್ ಸ್ನಾನ ಮಾಡಿ, ಆರ್ಓ ನೀರಿನ ರಿವರ್ಸ್ ತಂತ್ರದಿAದ ರೀಸರ್ವ ತಂತ್ರ ಅಳವಡಿಸಿಕೊಂಡು ಆ ನೀರನ್ನು ನೆಲ ಒರೆಸಲು, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಮತ್ತು ಇತರೆ ಕೆಲಸಗಳಿಗೆ ಉಪಯೋಗಿಸಿ.
ಬ್ರಷ್ ಮತ್ತು ಶೇವಿಂಗ್ ಮಾಡುವಾಗ ನಲ್ಲಿ ನೀರು ನೇರವಾಗಿ ಉಪಯೋಗಿಸದೇ ಒಂದು ಚೊಂಬಿನಲ್ಲಿ ನೀರು ಪಡೆದು ಉಪಯೋಗಿಸುವುದು ಸೂಕ್ತ. ಕಾರ್ ವಾಶ್, ತರಕಾರಿ, ಅಕ್ಕಿ ತೊಳೆದ ನೀರು ಗಿಡಗಳಿಗೆ ಹಾಕಿ. ಕೆಲ ಗಿಡಗಳಿಗೆ ಇದು ಗೊಬ್ಬರ ಇದ್ದಂತೆ. ನಲ್ಲಿಗಳು ಸೋರದಂತೆ ಎಚ್ಚರವಹಿಸಿ.
ಫ್ಲಸ್ ಟ್ಯಾಂಕ್ ನಲ್ಲಿ ಬಾಟಲ್ ತಂತ್ರ ಅಳವಡಿಸಿ ಖಾಲಿ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ತುಂಬಿ ಬಿಗಿಯಾಗಿ ಮುಚ್ಚಿ ಫ್ಲಸ್ ಒಳಗೆ ಇಡಿ. ಆಗ ಟ್ಯಾಂಕ್ ೧೦ ಲೀಟರ್ ಬದಲು ೯ ಲೀಟರ್ ಮಾತ್ರ ತುಂಬುತ್ತದೆ. ಪ್ರತಿ ಫ್ಲಸ್ಗೆ ಒಂದು ಲೀಟರ್ ಉಳಿತಾಯ. ಕುಟುಂಬವೊAದರಲ್ಲಿ ದಿನಕ್ಕೆ ೨೦ ಲೀಟರ್ ನಂತೆ ತಿಂಗಳಿಗೆ ೬೦೦ ಲೀಟರ್ ನೀರು ಉಳಿತಾಯ ಮಾಡಲು ಸಾಧ್ಯ.
ಹೀಗೆ ಮೇಲಿನ ತಂತ್ರಗಳಿAದ ಒಂದು ಕುಟುಂಬ ತಿಂಗಳಿಗೆ ಕನಿಷ್ಟ ೧೫ ರಿಂದ ೨೦ ಸಾವಿರ ಲೀಟರ್ ನೀರನ್ನು ಉಳಿಸಬಹುದು ಎಂದು ಲೆಕ್ಕ ಹಾಕಲಾಗಿದೆ. ಒಂದು ನೂರು ಮನೆಗಳಿರುವ ಅಪಾರ್ಟ್ಮೆಂಟ್ ತಿಂಗಳಿಗೆ ೨೦ ಲಕ್ಷ ಲೀಟರ್ ನೀರು ಉಳಿತಾಯ ಸಾಧ್ಯ. ಇದು ಒಂದು ಕೆರೆಯಷ್ಟು ನೀರು.
ಪ್ರಕೃತಿ ನಮಗೆ ಕೊನೆಯ ಅವಕಾಶ ಕೊಟ್ಟಿದೆ, ನವೆಂಬರ್ ನಿಂದ ಮೇ ವರೆಗಿನ ಈ ೨೦ ದಿನಗಳು ನಮ್ಮ ಪರೀಕ್ಷೆ. ಈ ಪರೀಕ್ಷೆಯಲ್ಲಿ ನಾವು ಗೆದ್ದರೆ ಮಾತ್ರ ಮುಂದಿನ ಮುಂಗಾರನ್ನು ನಾವು ನೋಡಲು ಸಾಧ್ಯ.
ನೆನಪಿಡಿ ನಮ್ಮ ಪೂರ್ವಜರು ಹೇಳಿರುವ ‘ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಯ . .’
“ಇಂದು ನಾವು ಪ್ರತಿ ಹನಿ ನೀರನ್ನು ಉಳಿಸದಿದ್ದರೆ, ನಾಳೆ ಪಶ್ಚಾತ್ತಾಪದ ಕಣ್ಣೀರು ಸುರಿಸಲು ಸಹ ನಮ್ಮ ಕಣ್ಣಲ್ಲಿ ನೀರು ಇರುವುದಿಲ್ಲ!’ ನೀರನ್ನು ಉಳಿಸಿ, ನಾಡನ್ನು ಉಳಿಸಿ, ನಾಳೆಯಿಂದಲ್ಲ, ಇಂದಿನಿAದಲೇ, ಈ ಕ್ಷಣದಿಂದಲೇ . . .
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.