📅 ಸೋಮವಾರ, ನವೆಂಬರ್ 2, 2026
Myna News Logo
RNI / PRGI : KNKAN/25/A1528
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Specials

ತಿನ್ನುವ ಆಹಾರ ವಿಷವಾದರೆ ಬದುಕಿಗೇ ಕುತ್ತು..!

ಸುಧೀರ್ ಬಿರಾದಾರ

ಸುಧೀರ್ ಬಿರಾದಾರ

ಪತ್ರಕರ್ತರು

ಶನಿವಾರ, ಅಕ್ಟೋಬರ್ 31, 20262 ನಿಮಿಷ ಓದು14 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ತಿನ್ನುವ ಆಹಾರ ವಿಷವಾದರೆ ಬದುಕಿಗೇ ಕುತ್ತು..!
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
ಆಹಾರ ಸುರಕ್ಷತೆ ಹೆಸರಿಗೆ ಸೀಮಿತವಾಗದಿರಲಿ; ಜಿಲ್ಲೆ, ತಾಲೂಕುಗಳಿಗೂ ತಪಾಸಣೆ ವಿಸ್ತರಿಸಲಿ ಮನುಷ್ಯನ ಬದುಕಿನ ಮೂಲಾಧಾರ ಆಹಾರ. ಹಸಿವು ನೀಗಿಸುವುದರ ಜತೆಗೆ ದೇಹಕ್ಕೆ ಶಕ್ತಿ ನೀಡಿ, ಆರೋಗ್ಯವನ್ನು ಕಾಪಾಡಬೇಕಾದ ಆಹಾರವೇ ಅನಾರೋಗ್ಯಕ್ಕೆ ಕಾರಣವಾದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಆದರೆ ಇಂದು ನಾವು ತಿನ್ನುತ್ತಿರುವ ಆಹಾರ ನಿಜಕ್ಕೂ ಸುರಕ್ಷಿತವೇ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡತೊಡಗಿದೆ. ಅಡುಗೆಮನೆಯಿಂದ ಹೋಟೆಲ್‌ವರೆಗೆ, ಕಿರಾಣಿ ಅಂಗಡಿಯಿAದ ದೊಡ್ಡ ಮಾರುಕಟ್ಟೆಗಳವರೆಗೆ ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ಮೂಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕಳವಳಕಾರಿ ಸಂಗತಿ. ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ನಿಯಂತ್ರಣಕ್ಕಾಗಿ ವ್ಯವಸ್ಥೆಗಳಿವೆ. ಆಹಾರ ಉತ್ಪಾದನೆ, ಸಂಸ್ಕರಣೆ, ಸಂಗ್ರಹಣೆ ಹಾಗೂ ಮಾರಾಟಕ್ಕೆ ಸಂಬAಧಿಸಿದAತೆ ನಿಯಮಗಳಿವೆ. ಆದರೂ ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿಯೊಂದು ಆಹಾರ ಉತ್ಪನ್ನದ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ವಿಶ್ವಾಸ ಮೂಡಿದೆಯೇ ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರ ಸಿಗುವುದು ಕಷ್ಟ. ಆಹಾರ ಸುರಕ್ಷತೆ ಕೇವಲ ನಿಯಮಗಳಲ್ಲಿರದೆ, ಜನರ ತಟ್ಟೆಯಲ್ಲೂ ಖಾತ್ರಿಯಾಗಬೇಕು. ಆಹಾರವೇ ಅನಾರೋಗ್ಯಕ್ಕೆ ಆಹ್ವಾನವಾದರೆ? ಹಾಲು, ಹಾಲಿನ ಉತ್ಪನ್ನಗಳು, ಸಿಹಿತಿಂಡಿಗಳು, ಬಿಸ್ಕತ್, ಅಡುಗೆ ಎಣ್ಣೆ, ಮಸಾಲೆ ಪದಾರ್ಥಗಳು, ಹಣ್ಣುಗಳು ಹಾಗೂ ತರಕಾರಿಗಳು ಪ್ರತಿದಿನ ನಮ್ಮ ಆಹಾರದ ಭಾಗವಾಗಿವೆ. ಇವುಗಳ ಗುಣಮಟ್ಟದಲ್ಲಿ ಲೋಪವಿದ್ದರೆ ಅದರ ಪರಿಣಾಮ ನೇರವಾಗಿ ಜನರ ಆರೋಗ್ಯದ ಮೇಲೆ ಬೀರುತ್ತದೆ. ಆಹಾರವನ್ನು ಆಕರ್ಷಕವಾಗಿಸಲು ಬಣ್ಣಗಳ ದುರ್ಬಳಕೆ, ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಲವು ಅಪಾಯಕಾರಿ ರಾಸಾಯನಿಕಗಳ ಬಳಕೆ, ಕಳಪೆ ಕಚ್ಚಾ ವಸ್ತುಗಳ ಉಪಯೋಗ ಹಾಗೂ ಸಂಗ್ರಹಣೆಯಲ್ಲಿನ ನಿರ್ಲಕ್ಷö್ಯ ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದು. ನಿಯಮಾನುಸಾರ ಅನುಮತಿಸಲಾದ ಪದಾರ್ಥಗಳನ್ನು ನಿಗದಿತ ಮಿತಿಯಲ್ಲಿ ಬಳಸುವುದಕ್ಕೂ, ನಿಷೇಧಿತ ಅಥವಾ ಅಪಾಯಕಾರಿ ಪದಾರ್ಥಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಆಹಾರ ಸುರಕ್ಷತಾ ತಪಾಸಣೆ ಇಂತಹ ವ್ಯತ್ಯಾಸಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಉಲ್ಲಂಘನೆ ಕಂಡುಬAದಾಗ ಕಠಿಣ ಕ್ರಮ ಕೈಗೊಳ್ಳುವಂತಿರಬೇಕು. ನಾವು ಖರೀದಿಸುವ ಆಹಾರದಲ್ಲಿ ಏನಿದೆ, ಅದು ಹೇಗೆ ತಯಾರಾಗಿದೆ, ಯಾವ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದೆ ಎಂಬುದನ್ನು ಪ್ರತಿಯೊಬ್ಬ ಗ್ರಾಹಕನೂ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆಹಾರದ ಸುರಕ್ಷತೆಯನ್ನು ಖಾತ್ರಿಪಡಿಸುವುದು ಕೇವಲ ಗ್ರಾಹಕರ ಹೊಣೆಗಾರಿಕೆಯಲ್ಲ; ಅದು ಉತ್ಪಾದಕರು, ಮಾರಾಟಗಾರರು ಮತ್ತು ಸಂಬAಧಪಟ್ಟ ಸರ್ಕಾರಿ ವ್ಯವಸ್ಥೆಗಳ ಜವಾಬ್ದಾರಿಯೂ ಹೌದು. ತಪಾಸಣೆ ಸುದ್ದಿಯಾಗಬಾರದು, ನಿರಂತರ ಪ್ರಕ್ರಿಯೆಯಾಗಬೇಕು ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಆಹಾರ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ, ಮಾದರಿ ಸಂಗ್ರಹಣೆ ಹಾಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಇಂತಹ ಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಆಹಾರ ವ್ಯಾಪಾರದಲ್ಲಿ ತೊಡಗಿರುವವರಿಗೂ ನಿಯಮ ಪಾಲನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುತ್ತವೆ. ಆದರೆ ಆಹಾರ ಸುರಕ್ಷತಾ ತಪಾಸಣೆ ಕೆಲವೇ ದಿನಗಳ ಅಭಿಯಾನಕ್ಕೆ ಅಥವಾ ಸುದ್ದಿಯಾಗುವ ಸಂದರ್ಭಗಳಿಗೆ ಸೀಮಿತವಾಗಬಾರದು. ಹಬ್ಬ ಹರಿದಿನಗಳಲ್ಲಿ ಮಾತ್ರ ಸಿಹಿತಿಂಡಿ ಅಂಗಡಿಗಳ ಪರಿಶೀಲನೆ, ದೂರು ಬಂದಾಗ ಮಾತ್ರ ಹೋಟೆಲ್‌ಗಳ ಮೇಲೆ ದಾಳಿ, ಮಾಧ್ಯಮಗಳಲ್ಲಿ ವರದಿಯಾದಾಗ ಮಾತ್ರ ಅಧಿಕಾರಿಗಳ ಚುರುಕು ಎಂಬ ಸ್ಥಿತಿ ಬದಲಾಗಬೇಕು. ಆಹಾರ ಸುರಕ್ಷತೆ ನಿರಂತರ ಮೇಲ್ವಿಚಾರಣೆಯ ಭಾಗವಾಗಬೇಕು. ಮಹಾನಗರಗಳಲ್ಲಿನ ದೊಡ್ಡ ಹೋಟೆಲ್‌ಗಳು, ಉತ್ಪಾದನಾ ಘಟಕಗಳು ಮತ್ತು ವಾಣಿಜ್ಯ ಮಳಿಗೆಗಳಷ್ಟೇ ಅಧಿಕಾರಿಗಳ ಗಮನಕ್ಕೆ ಬರಬಾರದು. ಜಿಲ್ಲಾ ಕೇಂದ್ರಗಳು, ತಾಲೂಕು ಪಟ್ಟಣಗಳು, ಸಣ್ಣಪುಟ್ಟ ಗ್ರಾಮಗಳಲ್ಲಿನ ಹೋಟೆಲ್‌ಗಳು, ಬೇಕರಿಗಳು, ಸಿಹಿತಿಂಡಿ ಅಂಗಡಿಗಳು, ಹಾಲಿನ ಮಳಿಗೆಗಳು, ಬೀದಿ ಬದಿ ಆಹಾರ ಮಳಿಗೆಗಳು ಹಾಗೂ ಆಹಾರ ಉತ್ಪಾದನಾ ಘಟಕಗಳ ಮೇಲೂ ತಪಾಸಣೆ ನಡೆಯಬೇಕು. ರಾಜಧಾನಿಯಲ್ಲಿ ನಡೆಯುವ ಆಹಾರ ಸುರಕ್ಷತಾ ಕ್ರಮಗಳ ಪರಿಣಾಮ ಗ್ರಾಮೀಣ ಪ್ರದೇಶದ ಗ್ರಾಹಕರಿಗೂ ತಲುಪಿದಾಗಲೇ ಅದರ ಉದ್ದೇಶ ಸಾರ್ಥಕವಾಗುತ್ತದೆ. ತಾಲೂಕು ಮಟ್ಟದಲ್ಲೂ ಬಲಗೊಳ್ಳಲಿ ಆಹಾರ ಸುರಕ್ಷತೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆಹಾರ ಸುರಕ್ಷತಾ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಆಹಾರ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವುದು, ಅವಧಿ ಮೀರಿದ ಹಾಗೂ ನಿಯಮಬಾಹಿರ ಉತ್ಪನ್ನಗಳ ಮಾರಾಟವನ್ನು ತಡೆಯುವುದು, ಸಂಗ್ರಹಣೆಯ ಸ್ವಚ್ಛತೆ ಪರಿಶೀಲಿಸುವುದು ಮತ್ತು ಆಹಾರ ತಯಾರಿಕೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಿಯಮಿತವಾಗಿ ನಡೆಯಬೇಕು. ಪರಿಶೀಲನೆಯಲ್ಲಿ ಲೋಪಗಳು ಕಂಡುಬAದರೆ ಸಂಬAಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ದಂಡ ವಿಧಿಸುವುದಷ್ಟೇ ಅಲ್ಲದೆ, ಗಂಭೀರ ಉಲ್ಲಂಘನೆಗಳ ಸಂದರ್ಭದಲ್ಲಿ ಕಾನೂನು ಒದಗಿಸುವ ಇತರ ಕ್ರಮಗಳನ್ನೂ ಕೈಗೊಳ್ಳಬೇಕು. ಮತ್ತೊಂದೆಡೆ, ನಿರಪರಾಧಿ ವ್ಯಾಪಾರಿಗಳಿಗೆ ಅನಗತ್ಯ ಕಿರುಕುಳ ನೀಡದಂತೆ ಪಾರದರ್ಶಕ ಮತ್ತು ವೈಜ್ಞಾನಿಕ ವಿಧಾನದಲ್ಲಿ ತಪಾಸಣೆ ನಡೆಯುವುದೂ ಅಷ್ಟೇ ಮುಖ್ಯ. ಆಹಾರ ಮಾದರಿಗಳ ಪರೀಕ್ಷಾ ಫಲಿತಾಂಶಗಳು, ಪತ್ತೆಯಾದ ಉಲ್ಲಂಘನೆಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಸಾರ್ವಜನಿಕರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವ ವ್ಯವಸ್ಥೆ ರೂಪಿಸಬೇಕು. ಇದರಿಂದ ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಹೊಣೆಗಾರಿಕೆ ಹೆಚ್ಚುವುದರ ಜತೆಗೆ ಜನರಲ್ಲಿಯೂ ವಿಶ್ವಾಸ ಮೂಡುತ್ತದೆ. ಲಾಭದ ಆಸೆಗೆ ಜನರ ಆರೋಗ್ಯ ಬಲಿಯಾಗದಿರಲಿ ಕೆಲವು ವ್ಯಾಪಾರಸ್ಥರು ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ಅದರ ಬೆಲೆ ಕಟ್ಟುವುದು ಗ್ರಾಹಕರು. ಆಹಾರ ತಯಾರಿಕೆಯಲ್ಲಿ ಕಳಪೆ ಪದಾರ್ಥಗಳನ್ನು ಬಳಸುವುದು, ಕೃತಕವಾಗಿ ಆಕರ್ಷಕ ಬಣ್ಣ ನೀಡುವುದು, ತಪ್ಪು ಮಾಹಿತಿ ಹೊಂದಿರುವ ಲೇಬಲ್‌ಗಳನ್ನು ಅಂಟಿಸುವುದು ಅಥವಾ ಉತ್ಪನ್ನದ ಗುಣಮಟ್ಟದ ಬಗ್ಗೆ ಸುಳ್ಳು ಭರವಸೆ ನೀಡುವುದು ಗ್ರಾಹಕರ ವಿಶ್ವಾಸಕ್ಕೆ ಮಾಡುವ ದ್ರೋಹವಾಗಿದೆ. ಆಹಾರ ಉದ್ಯಮದಲ್ಲಿ ತೊಡಗಿರುವ ಬಹುತೇಕ ವ್ಯಾಪಾರಸ್ಥರು ನಿಯಮಗಳನ್ನು ಪಾಲಿಸುತ್ತಿರಬಹುದು. ಆದರೆ ಕೆಲವರ ಉಲ್ಲಂಘನೆ ಇಡೀ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸುತ್ತದೆ. ಆದ್ದರಿಂದ ನಿಯಮ ಪಾಲಿಸುವ ವ್ಯಾಪಾರಸ್ಥರಿಗೆ ಪ್ರೋತ್ಸಾಹ ನೀಡುವುದರ ಜತೆಗೆ, ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಆಹಾರ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವ ಪ್ರತಿಯೊಬ್ಬರೂ ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕು. ಅವರು ಮಾರಾಟ ಮಾಡುವ ಆಹಾರವನ್ನು ತಮ್ಮ ಕುಟುಂಬದವರೂ ಸೇವಿಸಬಹುದು. ಲಾಭ ಗಳಿಸುವುದು ವ್ಯಾಪಾರದ ಉದ್ದೇಶವಾಗಿರಬಹುದು; ಆದರೆ ಆ ಲಾಭಕ್ಕಾಗಿ ಇನ್ನೊಬ್ಬರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುವ ಹಕ್ಕು ಯಾರಿಗೂ ಇಲ್ಲ. ಗ್ರಾಹಕರು ಆಹಾರ ಪದಾರ್ಥಗಳನ್ನು ಖರೀದಿಸುವಾಗ ತಯಾರಿಕೆ ಮತ್ತು ಅವಧಿ ಮುಕ್ತಾಯದ ದಿನಾಂಕ, ಪದಾರ್ಥಗಳ ವಿವರ, ಸಂಗ್ರಹಣೆಯ ಸ್ಥಿತಿ ಹಾಗೂ ಪ್ಯಾಕೆಟ್‌ಗಳ ಮೇಲಿನ ಅಗತ್ಯ ಮಾಹಿತಿಯನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅನುಮಾನಾಸ್ಪದ ಆಹಾರ ಉತ್ಪನ್ನಗಳು ಅಥವಾ ಅಸ್ವಚ್ಛ ಪರಿಸ್ಥಿತಿಯಲ್ಲಿ ಆಹಾರ ತಯಾರಿಸುವ ಮಳಿಗೆಗಳು ಕಂಡುಬAದರೆ ಸಂಬAಧಪಟ್ಟ ಇಲಾಖೆಗೆ ದೂರು ನೀಡಬೇಕು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ಮಾಹಿತಿಯನ್ನು ಹರಡುವುದರಿಂದ ಅನಗತ್ಯ ಆತಂಕ ಸೃಷ್ಟಿಯಾಗಬಹುದು. ಹೀಗಾಗಿ ದೂರುಗಳಿಗೂ ವೈಜ್ಞಾನಿಕ ಪರಿಶೀಲನೆಗೂ ಸಮಾನ ಮಹತ್ವ ನೀಡಬೇಕು. ಜನರ ಆರೋಗ್ಯವೇ ಮೊದಲ ಆದ್ಯತೆಯಾಗಲಿ ಆಹಾರ ಸುರಕ್ಷತೆ ಎನ್ನುವುದು ಕೇವಲ ಒಂದು ಇಲಾಖೆಯ ಆಡಳಿತಾತ್ಮಕ ಕೆಲಸವಲ್ಲ; ಅದು ಸಾರ್ವಜನಿಕ ಆರೋಗ್ಯಕ್ಕೆ ಸಂಬAಧಿಸಿದ ಅತ್ಯಂತ ಮಹತ್ವದ ಹೊಣೆಗಾರಿಕೆ. ಇಂದು ಆಹಾರದಲ್ಲಿ ನಡೆಯುವ ನಿರ್ಲಕ್ಷö್ಯ ನಾಳೆ ವ್ಯಕ್ತಿಯ ಆರೋಗ್ಯ, ಕುಟುಂಬದ ಆರ್ಥಿಕ ಸ್ಥಿತಿ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ ಸಮಸ್ಯೆ ಉಲ್ಬಣಿಸಿದ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ, ಅಪಾಯಕಾರಿ ಆಹಾರ ಜನರನ್ನು ತಲುಪುವ ಮೊದಲೇ ಅದನ್ನು ತಡೆಯುವುದು ಹೆಚ್ಚು ಪರಿಣಾಮಕಾರಿ. ರಾಜ್ಯ ಸರ್ಕಾರ ಮತ್ತು ಸಂಬAಧಪಟ್ಟ ಇಲಾಖೆಗಳು ಆಹಾರ ಸುರಕ್ಷತಾ ತಪಾಸಣೆಯನ್ನು ಮಹಾನಗರಗಳಿಗೆ ಸೀಮಿತಗೊಳಿಸದೆ ಪ್ರತಿಯೊಂದು ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬೇಕು. ಸಾಕಷ್ಟು ಸಿಬ್ಬಂದಿ, ಪರೀಕ್ಷಾ ಸೌಲಭ್ಯ, ನಿಯಮಿತ ಮೇಲ್ವಿಚಾರಣೆ ಮತ್ತು ತ್ವರಿತ ಕ್ರಮಗಳ ಮೂಲಕ ವ್ಯವಸ್ಥೆಯನ್ನು ಬಲಪಡಿಸಬೇಕು. ನಾವು ತಿನ್ನುವ ಆಹಾರ ಸುರಕ್ಷಿತವಾಗಿದೆಯೇ ಎಂಬ ಆತಂಕ ಪ್ರತಿದಿನವೂ ಕಾಡಬಾರದು. ಮಾರುಕಟ್ಟೆಯಲ್ಲಿ ದೊರೆಯುವ ಆಹಾರದ ಗುಣಮಟ್ಟದ ಬಗ್ಗೆ ಜನರಿಗೆ ವಿಶ್ವಾಸವಿರಬೇಕು. ಈ ವಿಶ್ವಾಸವನ್ನು ಮೂಡಿಸುವುದು ಕೇವಲ ಜಾಹೀರಾತುಗಳಿಂದಲೋ, ತಪಾಸಣೆಯ ಸುದ್ದಿಗಳಿಂದಲೋ ಸಾಧ್ಯವಿಲ್ಲ; ನಿರಂತರ ಕಾರ್ಯಾಚರಣೆ ಮತ್ತು ಹೊಣೆಗಾರಿಕೆಯ ಆಡಳಿತದಿಂದ ಮಾತ್ರ ಸಾಧ್ಯ. ಹಸಿವು ನೀಗಿಸುವ ಆಹಾರವೇ ಆರೋಗ್ಯಕ್ಕೆ ಕಂಟಕವಾಗಬಾರದು. ಲಾಭದ ಆಸೆಗೆ ಗುಣಮಟ್ಟ ಬಲಿಯಾಗಬಾರದು. ಆಹಾರ ಸುರಕ್ಷತೆ ಕಾಗದದ ಮೇಲಿನ ನಿಯಮವಾಗದೆ, ಪ್ರತಿಯೊಬ್ಬರ ತಟ್ಟೆಯಲ್ಲೂ ಖಾತ್ರಿಯಾಗಬೇಕು. ಜನರ ಆರೋಗ್ಯದೊಂದಿಗೆ ಯಾವುದೇ ರಾಜಿ ಸಲ್ಲದು.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.